Thursday, November 11, 2010
Friday, October 15, 2010
ನ್ಯೂಜಿಲೆಂಡ್ ಕನ್ನಡ ಕೂಟಕ್ಕೆ ನೂತನ ಕೇಂದ್ರ
ಈಗ ಕೂಟದ ಕಾರ್ಯಕಾರಿ ಸಮಿತಿಯ ಅವಿರತ
ಸಾಂಪ್ರದಾಯಿಕ ಪೂಜೆಯ ನಂತರ, ರತ್ನಾ ವಾಮನ ಮೂರ್ತಿ ಮತ್ತು ಡಾ.ಕಲ್ಬುರ್ಗಿ, ಡಾ. ಜಾಕೀ ಬ್ಲೂ , ನಟೇಶ್ ಮಾರಪ್ಪ, ಜೀತ್ ಸಚದೇವ್ ಅವರುಗಳು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ಅವರು ಎಲ್ಲರನ್ನು ಸ್ವಾಗತಿಸಿ ಸಾವಿರಾರು ಕನ್ನಡ ಪುಸ್ತಕಗಳು, ನಿಯತಕಾಲಿಕಗಳು ಮತ್ತು ಕನ್ನಡ ಚಲನಚಿತ್ರ
ಇದೊಂದು ಅವಿಸ್ಮರಣೀಯ ದಿನ ಎಂದು ಬಣ್ಣಿಸಿದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ಕೂಟದ ಚಟುವಟಿಕೆಗಳನ್ನು ವಿವರಿಸಿ ಸಂಸ್ಥಾಪಕರಾದ ದಿ. ಪ್ರಾಚಾರ್ಯ ವಾಮನ ಮೂರ್ತಿ, ಡಾ. ಲಿಂಗಪ್ಪ ಕಲ್ಬುರ್ಗಿ, ಭಾರತೀಯ ಸಮಾಜ, ಆಕ್ಲೆಂಡ್ ಇಂಡಿಯನ್ ಅಸೋಸಿಯೇಶನ್, ದಿ ಇಂಡಿಯನ್ ವೀಕೆಂಡರ್ ಸ್ಥಳೀಯ ಪತ್ರಿಕೆಯ ಮುಖ್ಯ ಸಂಪಾದಕ ದೇವ್ ನಾಡಕರ್ಣಿ, ಗ್ರಂಥಾಲಯಕ್ಕೆ ತಾತ್ಕಾಲಿಕವಾಗಿ ಆಶ್ರಯ ನೀಡಿ ನೆರವಾಗಿದ್ದ ನಟೇಶ್ ಮಾರಪ್ಪ ಮತ್ತು ಕೂಟದ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲರನ್ನು ವಂದಿಸಿದರು. ಉಪಾಧ್ಯಕ್ಷ ವಸಂತ ಕುಮಾರ್, ಕೂಟದ ಅನೇಕ ಹಿರಿಯ ಕಿರಿಯ ಸದಸ್ಯರುಗಳು ಮತ್ತು ಹಲವಾರು ಭಾರತೀಯ ಸಂಘ ಸಂಸ್ಥೆಗಳ ಸದಸ್ಯರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.
ನ್ಯೂಜಿಲೆಂಡ್ ಕನ್ನಡ ಕೂಟದ ಬಗ್ಗೆ : ಈ ಸಂಸ್ಥೆ ಸಂಖ್ಯಾಬಲದಿಂದ ಚಿಕ್ಕದಾದರೂ ನ್ಯೂಜಿಲೆಂಡಿನ ಭಾರತೀಯ ಸಂಘ ಸಂಸ್ಥೆಗಳ ಪೈಕಿ ಅತ್ಯಂತ ಕ್ರಿಯಾಶಾಲಿ ಎಂದು ದೇವ್ ನಾಡಕರ್ಣಿ ಹೇಳಿದ ಮಾತು ಅತಿಶಯೋಕ್ತಿಯಲ್ಲ.
ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕ ಕ್ರೀಡಾ ದಿನ, ಬೇಸಗೆಯ ಪಿಕ್ನಿಕ್, ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಸ್ಪರ್ಧೆ, ಮಕ್ಕಳ ಕಾರ್ಯಕ್ರಮ, ತಿಂಗಳಿಗೊಂದು ಸಿನಿಮಾ, ಕನ್ನಡ ಶಾಲೆ, ಕೀವಿ ಕನ್ನಡಿಗ ಪತ್ರಿಕೆ, ಸ್ಥಳೀಯ ಭಾರತೀಯ ಅಂತರ ಭಾಷಾ ಕ್ರಿಕೆಟ್
ರಾಯರ ಅನುಗ್ರಹ ಯಾಚಿಸಿದ ಅಮೆರಿಕನ್ನಡಿಗರು
ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಉತ್ತರ ಅಮೆರಿಕ
ಾದ ಪೂರ್ವ ಕರಾವಳಿಯಲ್ಲಿರುವ ಕನ್ನಡಿಗರು ಸೆಪ್ಟೆಂಬರ್ 12ರ ಭಾನುವಾರ ಶ್ರದ್ಧಾಭಕ್ತಿಗಳಿಂದ ಆಚರಿಸಿದರು. ವರ್ಜೀನಿಯಾದ ಫೇರ್ ಫ್ಯಾಕ್ಸ್ ಸ್ಟೇಷನ್ ಕೌಂಟಿಯಲ್ಲಿರುವ ದುರ್ಗಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರಾಧನೆಯಲ್ಲಿ ಸುಮಾರು 250 ಕನ್ನಡ ಕುಟುಂಬಗಳು ಕಲೆತು ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಮತಭೇದಗಳನ್ನು ಬದಿಗಿಟ್ಟು ರಾಯರ ಮಹಿಮೆಯನ್ನು ಕೊಂಡಾಡಿದರು.
ಶ್ರೀಹರಿವಾಯುಗುರುಗಳ ಪಾದಪೂಜೆಯ ಜತೆಗೆ ಇತರ ಸಾಂಪ್ರದಾಯಿಕ ಪೂಜಾದಿಗಳನ್ನು ಪೇಜಾವರ ಶ್ರೀಗಳ ಶಿಷ್ಯೋತ್ತಮರಲ್ಲೊಬ್ಬರಾದ ಹರೀಶ್ ಬೈಪಡ್ಡಿತ್ತಾಯ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದವರು. ಹರೀಶ್ ಮತ್ತು ಗೋಪಿನಾಥ ಗಲಗಲಿ ಅವರಿಂದ ಈ ಸಂದರ್ಭದಲ್ಲಿ ಪ್ರವಚನ ಏರ್ಪಡಿಸಲಾಗಿತ್ತು. ನಿಷ್ಕಲ್ಮಷ ಮನಸ್ಸಿನಿಂದ ರಾಯರ ಸ್ಮರಣೆ ಮಾಡುವ ಭಕ್ತರಿಗೆ ಐಹಿಕ ಮತ್ತು ಪಾರಮಾರ್ಥಿಕ ಫಲಗಳು ಪ್ರಾಪ್ತವಾಗುವುವು ಎಂದು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತ ವಿದ್ವಾನ್ ಗೋಪೀನಾಥ ಗಲಗಲಿ ಅವರು ನುಡಿದರು.
ಪ್ರವಚನಗಳ ನಂತರ ರಾಯಚೂರು
ಶೇಷಗಿರಿ ದಾಸ್ ಅವರಿಂದ ಹರಿದಾಸ ಕೀರ್ತನೆಗಳನ್ನು ಆಧರಿಸಿದ ಭಕ್ತಿನಾಮ ಸಂಕೀರ್ತನ ನಡೆಯಿತು. ಪಕ್ಕವಾದ್ಯದಲ್ಲಿ ಸ್ಥಳೀಯರೇ ಆದ ರಾಮನ್ (ವೇಣುವಾದನ) ಮತ್ತು ಸಾಮ್ರಾಟ್ (ತಬಲ) ಭಕ್ತಿ ಸಂಗೀತಕ್ಕೆ ಮಾಧುರ್ಯ ತುಂಬಿದರು. ಮಧ್ವರ ತತ್ವ ಮೀಮಾಂಸೆಗಳನ್ನು ಅಮೆರಿಕಾದಲ್ಲಿ ಪಸರಿಸಲು ಸದಾ ಉತ್ಸುಕರಾಗಿರುವ ಪೂರ್ವ ಕರಾವಳಿಯ ಜಯಕೃಷ್ಣ ನೆಲಮಂಗಲ, ನರಹರಿ ಮತ್ತು ವಾಸು ಮೂರ್ತಿ ಆರಾಧನೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯ ನಂತರ ಗಲಗಲಿ ಅವರು ಭಕ್ತಗಣಕ್ಕೆ ಫಲ ಮಂತ್ರಾಕ್ಷತೆ ವಿತರಿಸಿದರು.
ಬಹುತೇಕ ಕಾವೇರಿ ಕನ್ನಡ ಸಂಘದ ಸದಸ್ಯ ಕುಟುಂಬಗಳೇ ಪಾಲ್ಗೊಂಡಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಕಾವೇರಿಯ ಅಧ್ಯಕ್ಷ ಗುರು ನಾಗರಾಜ್, ಸದಸ್ಯರಾದ ವಿಜಯೇಂದ್ರ, ಫಲ್ಗುಣ, ಅನಿಲ್ ಕುಮಾರ್, ರಾಮಮೂರ್ತಿ, ರಾಘವೇಂದ್ರ, ಅಕ್ಕದ ಸದಸ್ಯ ಸಂಜಯ್ ರಾವ್ ಮತ್ತು ಕಾವೇರಿಯ ಮಾಜಿ ಅಧ್ಯಕ್ಷೆ ಮೀನಾ ರಾವ್, ಶ್ರೀವತ್ಸ ಜೋಶಿ
, ಸಹನಾ ಜೋಶಿ, ಕೃಷ್ಣಮೂರ್ತಿ ಜೋಯಿಸ್ ಮುಂತಾದವರು ಪಾಲ್ಗೊಂಡಿದ್ದರು. ದೇವಸ್ಥಾನಕ್ಕೆ ದಾರಿ.
ಇದೇ ವೇದಿಕೆಯಿಂದ ಮಾತನಾಡಿದ ಕಾವೇರಿಯ ಸಕ್ರಿಯ ಸದಸ್ಯೆ ಶರ್ಮಿಳಾ ಮೂರ್ತಿ ಬರಲಿರುವ ಕಾವೇರಿ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಸೆ. 18ರಂದು ಕಾವೇರಿ ಆಶ್ರಯದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೆಕ್ ಲೀನ್ ನಲ್ಲಿರುವ ಲ್ಯಾಂಗ್ಲೀ ಪ್ರೌಢಶಾಲೆಯಲ್ಲಿ ಅಂದು ಸಂಜೆ 4ರಿಂದ 8ರವರೆಗೆ ಏರ್ಪಡಿಸಲಾಗಿರುವ ಸಿದ್ಧಿ ವಿನಾಯಕ ಉತ್ಸವದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಒಪ್ಪುವ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಕನ್ನಡ ಕಲಿಯೋಣ ಮಕ್ಕಳ ಪ್ರಾರ್ಥನೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರಿಂದ ಕಿಂದರ ಜೋಗಿ ಮತ್ತು ಮಹಿಷಾಸುರ ಮರ್ದಿನಿ ನೃತ್ಯರೂಪಕಗಳ ಪ್ರದರ್ಶನ
ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧ್ಯಕ್ಷ ಗುರು ನಾಗರಾಜ್ ಅವರನ್ನು kaveri_president@yahoo.com ವಿಳಾಸದ ಮುಖಾಂತರ ಸಂಪರ್ಕಿಸಬಹದು ಎಂದು ಶರ್ಮಿಳಾ ಹೇಳಿದರು.
ಶ್ರೀಹರಿವಾಯುಗುರುಗಳ ಪಾದಪೂಜೆಯ ಜತೆಗೆ ಇತರ ಸಾಂಪ್ರದಾಯಿಕ ಪೂಜಾದಿಗಳನ್ನು ಪೇಜಾವರ ಶ್ರೀಗಳ ಶಿಷ್ಯೋತ್ತಮರಲ್ಲೊಬ್ಬರಾದ ಹರೀಶ್ ಬೈಪಡ್ಡಿತ್ತಾಯ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದವರು. ಹರೀಶ್ ಮತ್ತು ಗೋಪಿನಾಥ ಗಲಗಲಿ ಅವರಿಂದ ಈ ಸಂದರ್ಭದಲ್ಲಿ ಪ್ರವಚನ ಏರ್ಪಡಿಸಲಾಗಿತ್ತು. ನಿಷ್ಕಲ್ಮಷ ಮನಸ್ಸಿನಿಂದ ರಾಯರ ಸ್ಮರಣೆ ಮಾಡುವ ಭಕ್ತರಿಗೆ ಐಹಿಕ ಮತ್ತು ಪಾರಮಾರ್ಥಿಕ ಫಲಗಳು ಪ್ರಾಪ್ತವಾಗುವುವು ಎಂದು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತ ವಿದ್ವಾನ್ ಗೋಪೀನಾಥ ಗಲಗಲಿ ಅವರು ನುಡಿದರು.
ಪ್ರವಚನಗಳ ನಂತರ ರಾಯಚೂರು
ಬಹುತೇಕ ಕಾವೇರಿ ಕನ್ನಡ ಸಂಘದ ಸದಸ್ಯ ಕುಟುಂಬಗಳೇ ಪಾಲ್ಗೊಂಡಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಕಾವೇರಿಯ ಅಧ್ಯಕ್ಷ ಗುರು ನಾಗರಾಜ್, ಸದಸ್ಯರಾದ ವಿಜಯೇಂದ್ರ, ಫಲ್ಗುಣ, ಅನಿಲ್ ಕುಮಾರ್, ರಾಮಮೂರ್ತಿ, ರಾಘವೇಂದ್ರ, ಅಕ್ಕದ ಸದಸ್ಯ ಸಂಜಯ್ ರಾವ್ ಮತ್ತು ಕಾವೇರಿಯ ಮಾಜಿ ಅಧ್ಯಕ್ಷೆ ಮೀನಾ ರಾವ್, ಶ್ರೀವತ್ಸ ಜೋಶಿ
ಇದೇ ವೇದಿಕೆಯಿಂದ ಮಾತನಾಡಿದ ಕಾವೇರಿಯ ಸಕ್ರಿಯ ಸದಸ್ಯೆ ಶರ್ಮಿಳಾ ಮೂರ್ತಿ ಬರಲಿರುವ ಕಾವೇರಿ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಸೆ. 18ರಂದು ಕಾವೇರಿ ಆಶ್ರಯದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೆಕ್ ಲೀನ್ ನಲ್ಲಿರುವ ಲ್ಯಾಂಗ್ಲೀ ಪ್ರೌಢಶಾಲೆಯಲ್ಲಿ ಅಂದು ಸಂಜೆ 4ರಿಂದ 8ರವರೆಗೆ ಏರ್ಪಡಿಸಲಾಗಿರುವ ಸಿದ್ಧಿ ವಿನಾಯಕ ಉತ್ಸವದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಒಪ್ಪುವ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಕನ್ನಡ ಕಲಿಯೋಣ ಮಕ್ಕಳ ಪ್ರಾರ್ಥನೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರಿಂದ ಕಿಂದರ ಜೋಗಿ ಮತ್ತು ಮಹಿಷಾಸುರ ಮರ್ದಿನಿ ನೃತ್ಯರೂಪಕಗಳ ಪ್ರದರ್ಶನ
ಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ
ದಕ್ಷಿಣ ಕ್ಯಾಲಿಫೊರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ 'ಕನ್ನಡ
ಕಲಿ' ಆಕಾಶ್ ದೀಕ್ಷಿತ್‌ಗೆ 'ಸಾಂಸ್ಕೃತಿಕ ಪ್ರಜ್ಞೆ' ಪ್ರಶಸ್ತಿಯನ್ನು ಕೊಟ್ಟು ಫೆಬ್ರವರಿ 21ರಂದು ನಡೆದ ನಾಟಕೋತ್ಸವದ ಸಂದರ್ಭದಲ್ಲಿ ಪುರಸ್ಕರಿಸಿತು.
ಈಗ ಆಕಾಶ್ ಸಂಘದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2001ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಯನ್ನು ವರ್ಷಕ್ಕೊಮ್ಮೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಹೈಸ್ಕೂಲ್ ವಿಧ್ಯಾರ್ಥಿಗೆ ಕೊಡಲಾಗುತ್ತಿದೆ. ಇದಕ್ಕಾಗಿ ನಿಗದಿತ ವಿಷಯದ ಮೇಲೆ ಒಂದು ಪ್ರಬಂಧ ಬರೆಯಬೇಕು. ‘ನಾನು ಕನ್ನಡಿಗ’ ಎಂಬ ಪ್ರಶಸ್ತಿ ವಿಜೇತ ಪ್ರಬಂಧ ಬರೆದು ಆಕಾಶ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ವರ್ಷ, ಒಂದು ರಸಪ್ರಶ್ನೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಮತ್ತು ಕನ್ನಡ ಕುರಿತ ಸಾಂಸ್ಕೃತಿಕ ಪ್ರಶ್ನೆಗಳಲ್ಲದೆ, ಕನ್ನಡ ಓದಿ ಕನ್ನಡದಲ್ಲೆ ಉತ್ತರಿಸಬೇಕಾಗಿತ್ತು. ಇಲ್ಲಿನ ಕನ್ನಡ ಕಲಿ ತರಗತಿಗಳಲ್ಲಿ ತರಬೇತಿ ಹೊಂದಿದ ಮಕ್ಕಳಿಗೆ ಇದು ಸುಲಭವೆ ಆಗಿತ್ತು.
ಆಕಾಶ್ ಬಗ್ಗೆ : ಕಳೆದ 17 ವರ್ಷಗಳಿಂದ, ಅಂದರೆ ಹುಟ್ಟಿದಂದಿನಿಂದ, ಆಕಾಶ್ ಕೆ.ಸಿ.ಎ.ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ, ಅದರ ಯುವ ಸಮಿತಿಯ ಅಧ್ಯಕ್ಷನೂ ಆಗಿ ಕನ್ನಡ ಸೇವೆ ಮುಂದುವರಿಸಿದ್ದಾರೆ. ಯುವ ಸದಸ್ಯರಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ ಧನಸಂಗ್ರಹ ಕೂಡ ಮಾಡಿದ್ದಾರೆ. ಕನ್ನಡದಲ್ಲಿ ಎಮ್.ಸಿ. ಮಾಡಿದ್ದಾರೆ. ಸಂಘದ ಮ್ಯಾಗ್‌ಝೀನ್ 'ಸಂಗಮ'ದಲ್ಲಿ ಆಕಾಶ್ ಬರೆದಿರುವ ಅನೇಕ ಲೇಖನಗಳು ಪ್ರಕಟವಾಗಿವೆ.
ಅರ್ವೈನ್ ಜಾಗತಿಕ ಹಳ್ಳಿ ಹಬ್ಬಕ್ಕೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸುವಲ್ಲಿ ಸಹಾಯಹಸ್ತ ಚಾಚಿದ್ದಾರೆ ಆಕಾಶ್. ಸಂಗೀತದಲ್ಲಿ ತುಂಬ ಆಸಕ್ತಿ ಹೊಂದಿರುವ ಆಕಾಶ್, “ತಬಲ ಕಲಿಕೆ ಎಲ್ಲ ಕೆಲಸಗಳಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಳ್ಳಲು ನನಗೆ ತುಂಬಾ ಸಹಕಾರಿಯಾಗಿದೆ, ಅಲ್ಲದೆ ಸಮಾಧಾನ ಕೊಡುತ್ತದೆ” ಎಂದಿದ್ದಾರೆ.

ಎದೆ ಉಬ್ಬಿಸಿ ಹೇಳುತ್ತೇನೆ 'ನಾನು ಕನ್ನಡಿಗ'
ಕನ್ನಡಿಗ ಎಂದರೆ ಯಾರು? ಕನ್ನಡ
ಕುವೆಂಪು ಕೂಡ ಹಾಗೇ ಬಗೆದಿದ್ದರು:
ಎಲ್ಲಾದರು ಇರು, ಎಂತಾದರು ಇರು
ಎಂದೆಂದಿಗು ನೀ ಕನ್ನಡವಾಗಿರು
ನಾನೊಬ್ಬ ಅಭಿಮಾನಿ ಕನ್ನಡಿಗ. ಇದು ಕೇವಲ ತಾಯಿತಂದೆಯರ ಶ್ರದ್ಧೆಯ ಪರಿಸರದ ಪರಿಣಾಮವಲ್ಲ, ಇಲ್ಲಿನ ಪಾಶ್ಚಾತ್ಯ ಸಂಸ್ಕೃತಿಯ ‘ಕರಗಿಸುವ ಕಡಾಯಿ’ಯಲ್ಲಿ ಕರಗದೆ ಉಳಿದುಕೊಳ್ಳುವ ಕನ್ನಡತನದ ಅಂತಃಶಕ್ತಿಯ ಪ್ರತೀಕ ಕೂಡ ಹೌದು.
ಕನ್ನಡಿಗ ಎಂದು ಕರೆದುಕೊಳ್ಳುವುದು ಮಾರು ದೂರದ ಮುಕ್ತ ಸಂಬಂಧ, ಸುಲಭ; ಆದರೆ ಕನ್ನಡಿಗ ಆಗಿರಲು ಕನ್ನಡ ಸಂಸ್ಕೃತಿ
ಕನ್ನಡ ನುಡಿಯೆ ಕನ್ನಡ ಸಂಸ್ಕೃತಿಯ ಭಂಡಾರಕ್ಕೆ ಬೀಗದ ಕೈ. ಅನ್ಯ ಭಾಷೆಯಲ್ಲಿ ಬೌದ್ಧಿಕ ತಿಳಿವಳಿಕೆ ಸಾಧ್ಯವಾದರೂ, ಕನ್ನಡ ಸಂಸ್ಕೃತಿಯನ್ನು ಕನ್ನಡದಲ್ಲೆ ಬಾಳುವುದರಿಂದ ಮಾತ್ರ ಅರ್ಥಪೂರ್ಣ ಅನುಭವ ಸಾಧ್ಯ. ಇನ್ನೊಂದು ಭಾಷೆಯಲ್ಲಿ ಕನ್ನಡ ಸಂಸ್ಕೃತಿಯನ್ನು ಅರಿಯಲು ಯತ್ನಿಸಿದರೆ ಅದರೊಡನ ಐಕ್ಯತೆಯನ್ನು ಕಳೆದುಕೊಂಡು ಪರಕೀಯತೆಯ ಬಿರುಕು ಕೂಡಲೆ ಬೆಳೆದು ಕಂದರವಾಗುತ್ತದೆ. ಅಂತೆಯೆ, ಇಲ್ಲಿನ ಮೊದಲ ಜನಾಂಗದ ಕನ್ನಡಿಗರು ನಮಗೆ ಕನ್ನಡ ಕಲಿತು ಸಂಬಂಧ ಬೆಳೆಸುವ ವಿಧಾನ ರೂಪಿಸಿದ್ದಾರೆ. ಕನ್ನಡ ಕಲಿ ಅಂಥ ಒಂದು ಸಂಸ್ಥೆ. ಕನ್ನಡ ಕಲಿಯುವುದು, ಕಲಿಸುವುದು, ಮತ್ತು ಕನ್ನಡ ಕಲಿಗಳನ್ನು ಪ್ರೋತ್ಸಾಹಿಸುವುದು ಅದರ ಗುರಿ. ಕನ್ನಡ ಕಲಿಯ ಆರಂಭದಿಂದ ಅದರ ವಿದ್ಯಾರ್ಥಿಯಾಗಿದ್ದುದು ನನ್ನ ಭಾಗ್ಯ.
ನೀವು ಕನ್ನಡ ಹಿನ್ನೆಲೆ ಹೊಂದಿರಬಹುದು, ಕರ್ನಾಟಕದಲ್ಲಿ ಇರಬಹುದು, ಕನ್ನಡ ಅರಿಯಬಹುದು; ಇವಾವೂ ಕನ್ನಡಿಗ ಎಂದುಕೊಳ್ಳಲು ಸಾಕಾಗದು. | |
ನನ್ನ ಮೂಲ ಮತ್ತು ಹಿನ್ನೆಲೆ ಅರಿತುಕೊಳ್ಳಲು ಕನ್ನಡ ನನಗೆ ಮಾರ್ಗದರ್ಶಿಯಾಗಿದೆ. ಭಗವದ್ಗೀತೆಯ ಸಾರವನ್ನು ನನಗೆ ನನ್ನ ತಂದೆ ಹೇಳಿದ್ದು ಕನ್ನಡದಲ್ಲೆ. ನಂತರ ಇಡಿ ಗೀತೆಯನ್ನು ನನಗೋಸ್ಕರ ಕನ್ನಡಿಸಿದ್ದು ನನಗೆ ಹೆಮ್ಮೆಯ ವಿಷಯ. ಉದಾಹರಿಸಿದ ‘ಕಳಬೇಡ ಕೊಲಬೇಡ’, ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಇತ್ಯಾದಿ ಶರಣರ ವಚನಗಳು ನನಗೊಂದು ನೈತಿಕ ನೆಲೆಯನ್ನು ತೋರಿವೆ. ನನ್ನ ತಾಯ್ನುಡಿಯ ಸಂಬಂಧ ನನ್ನ ಎದೆಯಾಳದಲ್ಲಿ ಎಷ್ಟಿದೆ ಎಂದರೆ ಸುತ್ತಣ ಜಗತ್ತನ್ನು ಅದರ ಮೂಲಕ ಅರಿಯಲು ಸಾಧ್ಯ. ನನ್ನ ಮತ್ತು ಕನ್ನಡ ಸಂಸ್ಕೃತಿಯ ನಡುವೆ ಕನ್ನಡ ಒಂದು ವಿಶಿಷ್ಟ ಕೊಂಡಿಯಾಗಿದೆ. ಮುರಿಯಲಾಗದ ಈ ಬಂಧವೆ ನಾನು ಕನ್ನಡಿಗ ಅನಿಸಲು ಕಾರಣ.
‘ಅಕ್ಕ’ ಮತ್ತು ಕನ್ನಡ ಕೂಟಗಳು ಕನ್ನಡ ಸಂಸ್ಕೃತಿಯ ಅನೇಕ ಅಂಶಗಳನ್ನು ಅರಿಯಲು ಮತ್ತು ತೋರಿಸಲು ವೇದಿಕೆಗಳಾಗಿವೆ. ಕಾರ್ಯಕ್ರಮಗಳು ವೈಯುಕ್ತಿಕ ಪ್ರತಿಭೆಯನ್ನು ಹೊರತಂದಿವೆ. ನಾಟಕ, ನೃತ್ಯ, ಸಂಗೀತಗಳ ಕಾರ್ಯಕ್ರಮಗಳಲ್ಲಿ ಹುಟ್ಟಿದಾಗಿನಿಂದ ಭಾಗವಹಿಸಿದ್ದೇನೆ; ಎಮ್ಸೀ ಮಾಡಿದ್ದೇನೆ. ಕರ್ನಾಟಕ ಸಾಂಸ್ಕೃತಿಕ ಸಂಘ (ಕೆ.ಸಿ.ಎ.)ದ ಯುವಸಮಿತಿಯ ಅಧ್ಯಕ್ಷನಾಗಿದ್ದೇನೆ. ಈ ಯೋಜಿತ ಕಾರ್ಯಕ್ರಮಗಳಲ್ಲಿನ ಅನುಭವ ಮನಸ್ಸಿನ ಆಳವನ್ನು ತಟ್ಟಲು ಸಾಧ್ಯ. ಇಂಥ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯ ಮುಖಗಳನ್ನು ಕಂಡಿದ್ದೇನೆ. ಕೆ.ಸಿ.ಎ. ಯುವಸಮಿತಿಯಲ್ಲಿ ಸೇರಿದ್ದರಿಂದ, ದಕ್ಷಿಣ ಕ್ಯಾಲಿಫೋರ್ನಿಯದ ಕನ್ನಡ ಯುವಜನರೊಂದಿಗೆ ವಿನಿಮಯಕ್ಕೆ ಅನುವಾಯಿತು. ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಮುಖ ಕನ್ನಡಿಗರೊಂದಿಗೆ ಬೆರೆತದ್ದಾಯ್ತು. ಯುವ ಕಾರ್ಯಕ್ರಮಗಳು ನನ್ನ ಕನ್ನಡ ವಲಯ ಬೆಳೆಯುವಂತೆ ಮಾಡಿದವು. ಇಂಥ ಸಂವಹನ ಪ್ರಕ್ರಿಯೆ ವ್ಯಕ್ತಿಗಳ ನಡುವಣ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಸಂಪರ್ಕ ಹೆಚ್ಚಾದಂತೆ ಎಲ್ಲರಲ್ಲಿ ಒಂದಾಗುತ್ತೇವೆ - ಕನ್ನಡಿಗರಾಗುತ್ತೇವೆ.
ಕನ್ನಡ ಬಾಂಧವ್ಯ ಸದ್ಯಕ್ಕೆ ಮಾತ್ರ ಸೀಮಿತವಾದರೆ ಸಾಲದು. ಕನ್ನಡದ ಇತಿಹಾಸ, ಪರಂಪರೆಗಳನ್ನು ಅರಿತು ಸಂಸ್ಕೃತಿಯ ಬೇರುಗಳನ್ನು ಬೆಳೆಸಿಕೊಳ್ಳಬೇಕು. ಭಾರತಕ್ಕೆ ಭೇಟಿ ಇತ್ತಾಗ, ಸಮಯ ಕಡಿಮೆ ಆದರೂ, ಕರ್ನಾಟಕದ ಸುತ್ತ ಯಾತ್ರೆ ಕೈಗೊಂಡಿದ್ದೇನೆ. ನಾಡಿನ ಇತಿಹಾಸವನ್ನು ಪರಿಚಯಿಸಿಕೊಂಡಿದ್ದೇನೆ. ಐಹೊಳೆ, ಪಟ್ಟದಕಲ್ಲು, ಬದಾಮಿ, ಬಿಜಾಪುರ
ಕರ್ನಾಟಕದ ಕಲೆ ಕನ್ನಡ ಸಂಸ್ಕೃತಿಯ ಲಕ್ಷಣ ಮತ್ತು ಅಂಗ. ನೃತ್ಯ, ನಾಟಕ, ಸಾಹಿತ್ಯ, ಸಂಗೀತ ಎಲ್ಲ ಕಲೆಗಳೂ ಕರ್ನಾಟಕದ ಅವಿಭಾಜ್ಯ ಅಂಗಗಳು. ಈ ಎಲ್ಲದರಲ್ಲೂ ಸಂಪೂರ್ಣ ಪರಿಣತಿ ಹೊಂದುವುದು ಅಸಾಧ್ಯದ ಮಾತು. ನಾನು ಹಿಂದುಸ್ತಾನಿ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದೇನೆ. ವಿಶೇಷವಾಗಿ ತಬಲ ನುಡಿಸುತ್ತೇನೆ. ಹಾಡುಗಾರಿಕೆ ಮತ್ತು ವಾದ್ಯ ಸಂಗೀತಗಳಲ್ಲೂ ಆಸಕ್ತಿ ಹೊಂದಿದ್ದೇನೆ. ಸಂಗೀತದ ಸೌಂದರ್ಯ ಮತ್ತು ಶಕ್ತಿಯನ್ನು ಕಂಡೂಕೊಂಡಿದ್ದೇನೆ. ತಬಲ ನುಡಿಸಲು ಕುಳಿತುಕೊಂಡರೆ, ಶಾಂತಿ ಸಮಾಧಾನದ ಒಂದು ಭಾವ ನನ್ನನ್ನು ಆವರಿಸುತ್ತದೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪುರಂದರ ದಾಸರಂಥ ಸಂಗಿತದ ದಿಗ್ಗಜರೊಂದಿಗೆ ಅವ್ಯಕ್ತ ಸಂಬಂಧದ ಒಂದು ಬಳ್ಳಿ ಅಂಕುರಿಸುತ್ತದೆ. ಸಂಗೀತ ನನಗೊಂದು ಮಾರ್ಗದರ್ಶಿಯಾಗಿ ನನ್ನ ಸಂಸ್ಕೃತಿ ಪರಂಪರೆಗಳನ್ನು ಸದಾ ನೆನಪಿಸುವ ಧ್ರುವತಾರೆಯಾಗಿದೆ. ಕನ್ನಡತ್ವವನ್ನು ಮನಸ್ಸಿನಲ್ಲಿ ಆಳವಾಗಿ ಅಚ್ಚೊತ್ತಿ, ಮರೆಯಲು ಬಿಡದೆ, ನನಗೂ ನನ್ನ ಸಂಸ್ಕೃತಿಗೂ ಬಿದ್ದ ಬೆಸುಗೆಯಾಗಿದೆ.
ಜಗತ್ತಿನೊಡನಿರುವ ಸಂಬಂಧ ಸಂಪರ್ಕಗಳು ಒಂದು ರೀತಿಯಲ್ಲಿ ಮನುಷ್ಯನನ್ನು ನಿರೂಪಿಸುತ್ತವೆ. ನೀವು ಕನ್ನಡ ಹಿನ್ನೆಲೆ ಹೊಂದಿರಬಹುದು, ಕರ್ನಾಟಕದಲ್ಲಿ ಇರಬಹುದು, ಕನ್ನಡ ಅರಿಯಬಹುದು; ಇವಾವೂ ಕನ್ನಡಿಗ ಎಂದುಕೊಳ್ಳಲು ಸಾಕಾಗದು. ಕನ್ನಡಿಗನಾಗಿರುವುದು ತನ್ನತನದ ಅರಿವು, ಅಂತರಂಗದ ಭಾವ, ಒಳಗಿನ ಬೆಳಕು; ಕನ್ನಡ ಎನ್ನುವ ವಿಶ್ವಚೇತನದೊಂದಿಗೆ ಒಂದಿಕೆ. ಕುಟುಂಬ, ಬಂಧು, ಬಳಗ, ಗೆಳೆಯರಿಂದ ಆಚೆಗೂ ಗಟ್ಟಿ ಕನ್ನಡ ಸಂಬಂಧ ಬೇಕು. ಕನ್ನಡಿಗನಾಗಿರಲು ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅರ್ಥವನ್ನು ಅರಸುತ್ತಿರಬೇಕು. ಕನ್ನಡ ಸಂಸ್ಕೃತಿ, ಈ ಕರಗಿಸುವ ಕಡಾಯಿಯಲ್ಲಿ, ನನಗೊಂದು ವಿಶಿಷ್ಟ ಐಡೆಂಟಿಟಿ ಕೊಟ್ಟಿದೆ. ಅದನ್ನೆ ಪ್ರತಿಬಿಂಬಿಸುತ್ತ ಕನ್ನಡ ಹಿನ್ನೆಲೆಯ ಹರವು, ಅಗಾಧತೆ, ಶ್ರೀಮಂತಿಕೆಗಳ ಬೆಳಕಿನಲ್ಲಿ ಬೆರಗಾಗಿ ನಿಂತಿದ್ದೇನೆ. "ನಾನು ಕನ್ನಡಿಗ" ಎಂದು ಎದೆ ಉಬ್ಬಿಸಿ ಹೇಳುತ್ತಿದ್ದೇನೆ.
Subscribe to:
Posts (Atom)