ಶ್ರೀಹರಿವಾಯುಗುರುಗಳ ಪಾದಪೂಜೆಯ ಜತೆಗೆ ಇತರ ಸಾಂಪ್ರದಾಯಿಕ ಪೂಜಾದಿಗಳನ್ನು ಪೇಜಾವರ ಶ್ರೀಗಳ ಶಿಷ್ಯೋತ್ತಮರಲ್ಲೊಬ್ಬರಾದ ಹರೀಶ್ ಬೈಪಡ್ಡಿತ್ತಾಯ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದವರು. ಹರೀಶ್ ಮತ್ತು ಗೋಪಿನಾಥ ಗಲಗಲಿ ಅವರಿಂದ ಈ ಸಂದರ್ಭದಲ್ಲಿ ಪ್ರವಚನ ಏರ್ಪಡಿಸಲಾಗಿತ್ತು. ನಿಷ್ಕಲ್ಮಷ ಮನಸ್ಸಿನಿಂದ ರಾಯರ ಸ್ಮರಣೆ ಮಾಡುವ ಭಕ್ತರಿಗೆ ಐಹಿಕ ಮತ್ತು ಪಾರಮಾರ್ಥಿಕ ಫಲಗಳು ಪ್ರಾಪ್ತವಾಗುವುವು ಎಂದು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಸ್ಕೃತ ವಿದ್ವಾನ್ ಗೋಪೀನಾಥ ಗಲಗಲಿ ಅವರು ನುಡಿದರು.
ಪ್ರವಚನಗಳ ನಂತರ ರಾಯಚೂರು
ಬಹುತೇಕ ಕಾವೇರಿ ಕನ್ನಡ ಸಂಘದ ಸದಸ್ಯ ಕುಟುಂಬಗಳೇ ಪಾಲ್ಗೊಂಡಿದ್ದ ಸಮುದಾಯ ಕಾರ್ಯಕ್ರಮದಲ್ಲಿ ಕಾವೇರಿಯ ಅಧ್ಯಕ್ಷ ಗುರು ನಾಗರಾಜ್, ಸದಸ್ಯರಾದ ವಿಜಯೇಂದ್ರ, ಫಲ್ಗುಣ, ಅನಿಲ್ ಕುಮಾರ್, ರಾಮಮೂರ್ತಿ, ರಾಘವೇಂದ್ರ, ಅಕ್ಕದ ಸದಸ್ಯ ಸಂಜಯ್ ರಾವ್ ಮತ್ತು ಕಾವೇರಿಯ ಮಾಜಿ ಅಧ್ಯಕ್ಷೆ ಮೀನಾ ರಾವ್, ಶ್ರೀವತ್ಸ ಜೋಶಿ
ಇದೇ ವೇದಿಕೆಯಿಂದ ಮಾತನಾಡಿದ ಕಾವೇರಿಯ ಸಕ್ರಿಯ ಸದಸ್ಯೆ ಶರ್ಮಿಳಾ ಮೂರ್ತಿ ಬರಲಿರುವ ಕಾವೇರಿ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಸೆ. 18ರಂದು ಕಾವೇರಿ ಆಶ್ರಯದಲ್ಲಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಮೆಕ್ ಲೀನ್ ನಲ್ಲಿರುವ ಲ್ಯಾಂಗ್ಲೀ ಪ್ರೌಢಶಾಲೆಯಲ್ಲಿ ಅಂದು ಸಂಜೆ 4ರಿಂದ 8ರವರೆಗೆ ಏರ್ಪಡಿಸಲಾಗಿರುವ ಸಿದ್ಧಿ ವಿನಾಯಕ ಉತ್ಸವದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಒಪ್ಪುವ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಕನ್ನಡ ಕಲಿಯೋಣ ಮಕ್ಕಳ ಪ್ರಾರ್ಥನೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪ್ರಭಾತ್ ಕಲಾವಿದರಿಂದ ಕಿಂದರ ಜೋಗಿ ಮತ್ತು ಮಹಿಷಾಸುರ ಮರ್ದಿನಿ ನೃತ್ಯರೂಪಕಗಳ ಪ್ರದರ್ಶನ
No comments:
Post a Comment