ಕೊಟ್ಟ ಮಾತಿನಂತೆ ವಾರದೊಳಗೆ ಸಂಪುಟ ವಿಸ್ತರಣೆ ಮಾಡಿ, ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ
ಐವರು ಪಕ್ಷೇತರರು ಸೇರಿ 16 ಶಾಸಕರು ಅನರ್ಹಗೊಂಡಿರುವುದರಿಂದ ಸರಕಾರ ಅಲ್ಪ ಬಹುಮತಕ್ಕಿಳಿದಿದೆ. ಇದರಿಂದ ಸರಕಾರಕ್ಕೆ ಅಪಾಯ ಯಾವತ್ತೂ ತಪ್ಪಿದ್ದಲ್ಲ. ಮರು ಚುನಾವಣೆಯಲ್ಲಿ ಗೆಲ್ಲುವವರೆಗೂ ಈಗಿರುವ ಶಾಸಕರ ಸಂಖ್ಯೆ ಕಾಪಾಡಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸರಕಾರ ಪತನವಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಸರಕಾರ ಸುಭದ್ರ ಗೊಳಿಸಲು ಆಪರೇಷನ್ ಕಮಲ ನಡೆಸಬೇಕು ಎಂಬ ಆಲೋಚನೆ ಇದೆ.
ಇದಕ್ಕೆ ಪಕ್ಷದಲ್ಲಿ ಒಮ್ಮತಾಭಿಪ್ರಾಯ ಸಿಕ್ಕರೆ ಮುಂದಿನ ಹೆಜ್ಜೆ ಇಡಲು ಹಾಗೂ ಸಂಪುಟದಲ್ಲಿ 4 ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ಚಿಂತನೆ ನಡೆದಿದೆ. ಈ ನಿರ್ಧಾರದಿಂದ ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ಹಿರಿಯ ಶಾಸಕರಿಗೆ ನಿರಾಶೆ ಆಗಬಹುದು. ಶಾಸಕರಾದ ಸಿ.ಟಿ.ರವಿ, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಅಪ್ಪು ಪಟ್ಟಣ ಶೆಟ್ಟಿ ಸೇರಿದಂತೆ ಹಲವರು ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ.
No comments:
Post a Comment