ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡು ಸಂಜೆ 6 ಗಂಟೆಗೆ ಸಮಾರೋಪಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಬಿ.ಆರ್.ಶೆಟ್ಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಭಾರತದ ರಾಯಭಾರಿ ಎಂ.ಕೆ. ಲೋಕೇಶ್ ಪಾಲ್ಗೊಳ್ಳಲಿದ್ದಾರೆ.
ಖ್ಯಾತ ಹಾಸ್ಯ
ಕಾರ್ಯಕ್ರಮದಲ್ಲಿ ಸಮೂಹ ನೃತ್ಯ ಮತ್ತು ಸಮೂಹ ಗಾಯನದ ಜೊತೆಗೆ ಇತರ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿದ್ದು ಆಸಕ್ತರು ತಮ್ಮ ಹೆಸರನ್ನು ಅನಂತ್ (050 – 7891843)ಅಥವಾ ಮನೋಹರ್ (050 – 5212079) ಅವರಲ್ಲಿ ನೊಂದಾಯಿಸಬೇಕಾಗಿ ಅವರು ಕೋರಿದ್ದಾರೆ.
ಪ್ರತಿಭಾ ಪುರಸ್ಕಾರ : ಯು.ಎ.ಇ.ಯಲ್ಲಿನ ಯುವ ಪ್ರತಿಭೆಗಳನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲು ತೀರ್ಮಾನಿಸಲಾಗಿದ್ದು 10 ಮತ್ತು 12ನೇ ತರಗತಿಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು, ಕ್ರೀಡೆ ಮತ್ತು ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಶಾಲಾ ಕಾಲೇಜನ್ನು ಪ್ರತಿನಿಧಿಸಿ ಪದಕಗಳನ್ನು ಪಡೆದಿರುವಂತಹ ವಿದ್ಯಾರ್ಥಿಗಳು ತಮ್ಮ ವಿವರಗಳ ಕುರಿತಾದ ಮಾಹಿತಿಯನ್ನು ಈ ವಿಳಾಸಕ್ಕೆ sarvo@eim.ae ಮೇಲ್ ಮಾಡಬೇಕಾಗಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಸರ್ವೋತ್ತಮ ಶೆಟ್ಟಿ – 50-6125464
No comments:
Post a Comment