ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಪುಸ್ತಕಗಳು ಮೊದಲೇ ಕಡಿಮೆ. ಇರುವ ಪುಸ್ತಕಗಳಿಗೆ ಪ್ರಚಾರವಂತೂ ಇಲ್ಲವೇ ಇಲ್ಲ. ಹೀಗಾಗಿ ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳೆಷ್ಟು ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟದ ಕೆಲಸ.
ನನ್ನ ಇ-ಜ್ಞಾನ ಬ್ಲಾಗ್ ಇದೀಗ ಈ ಪ್ರಶ್ನೆಗೆ ಉತ್ತರ ಹುಡುಕುವ ಕೆಲಸ ಶುರುಮಾಡಿದೆ. ಕನ್ನಡದಲ್ಲಿ ಈವರೆಗೆ ಪ್ರಕಟವಾಗಿರುವ ಐಟಿ ಪುಸ್ತಕಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿಯನ್ನು ದಯಮಾಡಿ ಹಂಚಿಕೊಳ್ಳಿ.
ಈವರೆಗೆ ಸಂಗ್ರಹಿಸಲಾಗಿರುವ ಮಾಹಿತಿಗೆ ಇ ಜ್ಞಾನ ನೋಡಿ. ಪಟ್ಟಿಯಲ್ಲಿ ದಾಖಲಾಗಿರುವ ಪುಸ್ತಕಗಳ ವಿವರಣೆ ತಪ್ಪು ಅಥವಾ ಅಪೂರ್ಣವಾಗಿದ್ದರೆ ಅದನ್ನೂ ಹೇಳಿ.ನಿಮ್ಮ ಪ್ರತಿಕ್ರಿಯೆಗಳನ್ನು ದಯಮಾಡಿ ಇಮೇಲ್ ಮಾಡಿ, ಅಥವಾ ಇ-ಜ್ಞಾನದಲ್ಲಿ ಕಮೆಂಟ್ ಆಗಿ ಸೇರಿಸಿ ಎಂದು ಟಿ ಜಿ ಶ್ರೀನಿಧಿ ಅವರು ಕೋರಿದ್ದಾರೆ. ಅವರ ಇಮೇಲ್ : srinidhi@srinidhi.net.in
No comments:
Post a Comment